ಭಾನುವಾರ , ಅಗಸ್ಟ್ 29, 2010
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
" "
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹವಾಮಾನ
ಸುಭಾಷಿತ
ಕಷ್ಟದಲ್ಲಿರುವವರ ಕಣ್ಣೀರು ಒರೆಸಲು ಕೈಲಾದ ಪ್ರಯತ್ನ ಮಾಡುವುದು ಮನುಷ್ಯನ ಸದ್ಗುಣ.
--ಟ್ರ್ಯಾಂಡರ್
ಪುರವಣಿ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಚಿತ್ರ ವಿಮರ್ಶೆ
ಭೂಮಿಕಾ
ಆರೋಗ್ಯ
ಮೆಟ್ರೊ ಶನಿವಾರ
ಯುವಜನ
ಕ್ರೀಡಾ ಪುರವಣಿ
ಮೆಟ್ರೊ ಮಂಗಳವಾರ
ಸಿನಿಮಾ- ಕಿರುತೆರೆ ರಂಜನೆ
ಕೃಷಿ
ಕರ್ನಾಟಕ ದರ್ಶನ
ಶಿಕ್ಷಣ ಪುರವಣಿ
ವಾಣಿಜ್ಯ ಪುರವಣಿ
ಮೆಟ್ರೊ ಗುರುವಾರ
ತಂತ್ರಜ್ಞಾನ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್
ಅಂಕಣಗಳು
ಪದ್ಮರಾಜ ದಂಡಾವತಿ
ಎಚ್. ಡುಂಡಿರಾಜ್
ಲಕ್ಷ್ಮಣ ಕೊಡಸೆ
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್ ಅಮಿನ್‌ಮಟ್ಟು
ಯು.ಆರ್. ಅನಂತಮೂರ್ತಿ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಪುಸ್ತಕ ವಿಮರ್ಶೆ
ಸಾಂಸ್ಕೃತಿಕ ಜೀವನ ಕ್ರಮಗಳ ಚಿತ್ರಣ
-ಸ್ವಯಂಪ್ರಭಾ
ಬಾಲಗಂಗಾಧರರು ತಮ್ಮ ಗ್ರಂಥಕ್ಕೆ ಬರೆದ ಪ್ರಸ್ತಾವನೆಯಲ್ಲಿ ಎರಡು ವಿಷಯಗಳ ಕುರಿತು ಗಮನ ಸೆಳೆಯುತ್ತಾರೆ. ಮೊದಲನೆಯದು, ಈ ಗ್ರಂಥವು ರಿಲಿಜನ್‌ನ ಜಿಜ್ಞಾಸೆಯ ನಿಟ್ಟಿನಲ್ಲಿ ಒಂದು ಪ್ರಾರಂಭಿಕ ಪ್ರಯತ್ನ. ಇದು ರಿಲಿಜನ್ನಿನ ಕಥೆಯೇ ನಿಜ.


ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ

ಇಂಗ್ಲಿಷ್ ಮೂಲ:ಪ್ರೊ. ಎಸ್.ಎನ್. ಬಾಲಗಂಗಾಧರ, ಕನ್ನಡಕ್ಕೆ:ರಾಜಾರಾಮ ಹೆಗಡೆ, ಪುಟ:572, ಬೆಲೆ:ರೂ. 415
ಪ್ರಕಾಶನ:ಅಕ್ಷರ ಪ್ರಕಾಶನ,ಹೆಗ್ಗೋಡು, ಸಾಗರ.

ಬೆಲ್ಜಿಯಂನ ಗೆಂಟ್ ವಿಶ್ವವಿದ್ಯಾನಿಲಯದ ಸಂಸ್ಕೃತಿಗಳ ತುಲನಾತ್ಮಕ ವಿಜ್ಞಾನ ವಿಭಾಗದಲ್ಲಿ ಫಿಲಾಸಫಿ ಪ್ರೊಫೆಸರ್ ಆಗಿರುವ ಬಾಲಗಂಗಾಧರ ಅವರ The Heathen in his Blindness…Asia the West and the Dynamics of Religion ಜಾಗತಿಕ ಚರ್ಚೆಗಳನ್ನು ಹುಟ್ಟುಹಾಕಿದ ಮಹತ್ವದ ಕೃತಿ. ಭಾರತೀಯ ಸಂಸ್ಕೃತಿಯ ಕುರಿತ ಇತ್ತೀಚಿನ ಜಿಜ್ಞಾಸೆಗಳನ್ನು ಕನ್ನಡ ಓದುಗರಿಗೆ ಪರಿಚಯಿಸುವ ಉದ್ದೇಶದಿಂದ ಬಾಲಗಂಗಾಧರರ ಕೃತಿ ‘ಸ್ಮೃತಿ-ವಿಸ್ಮೃತಿ: ಭಾರತೀಯ ಸಂಸ್ಕೃತಿ’ ಹೆಸರಿನಲ್ಲಿ, ರಾಜಾರಾಮ ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ.

ಭಾರತೀಯನ ಕಣ್ಣಿಂದ ಪಶ್ಚಿಮದ ವೈಶಿಷ್ಟ್ಯತೆಗಳನ್ನು ಹಾಗೂ ಮಿತಿಗಳನ್ನು ನೋಡಿ, ನಮ್ಮ ಸಂಸ್ಕೃತಿಯ ಕುರಿತ ಯತಾರ್ಥ ತಿಳಿವಳಿಕೆಗೆ ಹೊಸ ವೈಜ್ಞಾನಿಕ ಹಾದಿಗಳನ್ನು ತೆರೆಯಲು ಪ್ರಯತ್ನಿಸುವ ಈ ಕೃತಿ, ಸಂಸ್ಕೃತಿಗೆ ಸಂಬಂಧಿಸಿದಂತೆ ಗೊಂದಲಪೂರ್ಣ ಸನ್ನಿವೇಶದಿಂದ ಹೊರಬರಲು ಭಾರತೀಯ ಸಂಸ್ಕೃತಿ ಚಿಂತಕರಿಗೆ ನೆರವಾಗುವಂತಿದೆ. 

ಈ ಕೃತಿ ವಾದವನ್ನು ಹೀಗೆ ಮಂಡಿಸುತ್ತದೆ:
ಧರ್ಮ ಮಾನವ ಸಂಸ್ಕೃತಿಗಳಿಗೆ ಸಾಮಾನ್ಯವಾದ ಲಕ್ಷಣವಲ್ಲ. ಅಂದರೆ, ಎಲ್ಲಾ ಸಂಸ್ಕೃತಿಗಳಲ್ಲೂ ಒಂದಿಲ್ಲೊಂದು ರಿಲಿಜನ್ ಇರಲೇ ಬೇಕೆಂದೇನೂ ಇಲ್ಲ. ಎಲ್ಲಾ ಸಂಸ್ಕೃತಿಗಳಲ್ಲೂ ರಿಲಿಜನ್ನು ಇರುತ್ತದೆಯೆಂಬುದು ಐರೋಪ್ಯ ಸಂಸ್ಕೃತಿಯ ನಿರಾಧಾರವಾದ ನಂಬಿಕೆ. ಇದರ ಜತೆಗೆ ಐರೋಪ್ಯರಿಗೆ ರಿಲಿಜನ್ ಎಲ್ಲೆಡೆಯಲ್ಲೂ ಇರುವಂತೇ ಕಾಣಲು ಕಾರಣವೇನು? ಹೀಗೆ ಕಾಣುವ ಪ್ರಕ್ರಿಯೆಯು ಹೇಗೆ ನಡೆಯುತ್ತದೆ? ಹಾಗೂ ಈ ಸಮಸ್ಯೆಗೂ ನಮ್ಮ ಸಂಸ್ಕೃತಿ ಅಧ್ಯಯನಕ್ಕೂ ಏನು ಸಂಬಂಧ? ಎಂಬ ವಿಷಯವನ್ನೂ ಚರ್ಚಿಸುತ್ತದೆ.

ಮೇಲಿನ ವಾದವು ಸಂಸ್ಕೃತಿಯ ಸಂದರ್ಭಕ್ಕಷ್ಟೇ ಸೀಮಿತವಾದುದಲ್ಲ. ಇದು ಭಾರತೀಯ ಸಮಾಜಕ್ಕೆ ಸಂಬಂಧಿಸಿದಂತೆ ಯಾವುದೇ ಸಿದ್ಧಾಂತಗಳನ್ನು ಬೆಳೆಸಲಿಕ್ಕೂ ಹೊಸದಾರಿಗಳನ್ನು ತೆರೆಯಬಲ್ಲದು. ಈ ವಾದವನ್ನು ಕೇಳಿದಾಕ್ಷಣ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳು ಬರುತ್ತವೆ. ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ ಇದೆ ಎಂದು ಭದ್ರವಾಗಿ ನಂಬಿದ ಕೇಳುಗರಿಗೆ ಇದೊಂದು ಆತ್ಮನಿಂದನೆಯಂತೆ ತೋರುತ್ತದೆ. ಭಾರತೀಯರಿಗೆ ರಿಲಿಜನ್ನಿನಂಥ ಉದಾತ್ತವಾದ ಅಂಗವೇ ಊನವಾಗಿದೆಯೆ? ನಮಗೆ ಜೀವನ ಮೌಲ್ಯಗಳೇ ಇಲ್ಲವೆ? ನಮಗೂ ದೇವರು, ಪೂಜೆ, ನಂಬಿಕೆ, ಶ್ರದ್ಧೆ, ಮುಂತಾದವುಗಳಿಲ್ಲವೆ? ಇತ್ಯಾದಿ.

ಬಾಲಗಂಗಾಧರರು ತಮ್ಮ ಗ್ರಂಥಕ್ಕೆ ಬರೆದ ಪ್ರಸ್ತಾವನೆಯಲ್ಲಿ ಎರಡು ವಿಷಯಗಳ ಕುರಿತು ಗಮನ ಸೆಳೆಯುತ್ತಾರೆ. ಮೊದಲನೆಯದು, ಈ ಗ್ರಂಥವು ರಿಲಿಜನ್‌ನ ಜಿಜ್ಞಾಸೆಯ ನಿಟ್ಟಿನಲ್ಲಿ ಒಂದು ಪ್ರಾರಂಭಿಕ ಪ್ರಯತ್ನ. ಇದು ರಿಲಿಜನ್ನಿನ ಕಥೆಯೇ ನಿಜ. ಆದರೆ ಇದನ್ನು ಕೇವಲ ರಿಲಿಜನ್ನಿನ ಕಥೆ ಎಂದುಕೊಂಡರೆ ತಿರುಳನ್ನು ಬಿಸುಟು ಸಿಪ್ಪೆಯನ್ನು ತಿಂದಂತಾಗುತ್ತದೆ. ಇದರ ತಿರುಳು ಭಾರತೀಯರ ಸಂದರ್ಭದಲ್ಲಿ ಪರ್ಯಾಯ ಸಮಾಜ ವಿಜ್ಞಾನದ ಸಾಧ್ಯತೆಗಳನ್ನು ಶೋಧಿಸುತ್ತದೆ. ಎರಡನೆಯದಾಗಿ, ಈ ಸಂವಾದವು ಒಂದು ನಿರ್ದಿಷ್ಟವಾದ ಗುಂಪಿನ ಜೊತೆಗೆ ನಡೆದಿದೆ; ಎಲ್ಲಾ ಸಂಸ್ಕೃತಿಗಳಲ್ಲೂ ರಿಲಿಜನ್ನನ್ನು ಕಾಣುವ ಅಥವಾ ಹುಡುಕುವ ಗುಂಪು ಅದು. ಈ ಸಂವಾದದ ಪರಿಣಾಮಗಳು ಎಲ್ಲ ಭಾರತೀಯರನ್ನೂ ಒಳಗೊಂಡರೂ ಕೂಡಾ, ಈ ಸಂವಾದವು ಸಾಧ್ಯವಿರುವುದು ಈ ಮೇಲಿನ ಗುಂಪಿನೊಳಗೆ ಮಾತ್ರ.

ಸಂಖ್ಯೆಯಲ್ಲಿ ಇದು ತೀರಾ ಸಣ್ಣದಾಗಿದ್ದರೂ ಸಮಾಜದ ಬದುಕಿನ ಕ್ರಮಗಳನ್ನು ಕಟ್ಟಿಕೊಡುತ್ತಿರುವ ಹಾಗೂ ಅದನ್ನು ರೂಪಿಸುವ ಕುರಿತು ಮಾತನಾಡುತ್ತಿರುವ ಗುಂಪಾಗಿರುವುದರಿಂದ ಈ ಸಂವಾದಕ್ಕೆ ಸಾಮಾಜಿಕ ಪರಿಣಾಮಗಳಿವೆ.

ಇತರ ಸುದ್ದಿಗಳು
ಪುಸ್ತಕಗಳು ಸಾಯುವುದಿಲ್ಲ, ಉಸಿರಾಡುತ್ತವೆ
ಹೇಳಿ ಮುಗಿಸುವ ಅಸೀಮ ಕಾವ್ಯ
ಅನುಪಮ ಆತ್ಮಕಥೆಯ ಚನ್ನಮ್ಮ
ಆಸಕ್ತಿ ಗೆದ್ದಿದೆ, ಅಭಿವ್ಯಕ್ತಿ ಸೊರಗಿದೆ
ಅನ್ನ ಅಕ್ಷರಗಳ ನಡುವಣ ಇನ್ನೊಂದು
ನವ ಪ್ರಕಾಶನ
ಸಾಂಸ್ಕೃತಿಕ ಜೀವನ ಕ್ರಮಗಳ ಚಿತ್ರಣ
ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000 ಫ್ಯಾಕ್ಸ್:: 25880618